Current Date 09 May, 2026

ವೇದಿಕೆಗಳಲ್ಲಿ ರಘು ದೀಕ್ಷಿತ್ ಪಂಚೆ ಉಟ್ಟು, ಗೆಜ್ಜೆ ಕಟ್ಟಿ ಹಾಡುವುದು ಯಾಕೆ?

ಬೆಂಗಳೂರಿನಲ್ಲಿ ರಘು ದೀಕ್ಷಿತ್ ಲೈವ್ ಕಾನ್ಸರ್ಟ್ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ಮಳೆಯನ್ನು ಲೆಕ್ಕಿಸದೇ ಸಂಗೀತ ಪ್ರೇಮಿಗಳು ರಘು ಸಂಗೀತ, ಗಾಯನಕ್ಕೆ ಮಾರು ಹೋದರು. ತಮ್ಮ ವಿಭಿನ್ನ ಶೈಲಿಯ ಹಾಡುಗಳಿಂದ ಸಂಗೀತ ಸಂಜೆಯನ್ನು ರಘು ಯಶಸ್ವಿಗೊಳಿಸಿದರು. ಇನ್ನು ವೇದಿಕೆಯಲ್ಲಿ ಯಾಕೆ ವಿಭಿನ್ನ ಕಾಸ್ಟ್ಯೂಮ್ ಎನ್ನುವ ಬಗ್ಗೆ ರಘು ಮಾತನಾಡಿದ್ದಾರೆ.

ಡಿಸೆಂಬರ್ 1ರಂದು ವೈಟ್‌ಫೀಲ್ಡ್‌ನಲ್ಲಿರುವ ಫೀನಿಕ್ಸ್ ಮಾರ್ಕೆಟ್‌ಸಿಟಿ ಮಾಲ್‌ನಲ್ಲಿ ರಘು ದೀಕ್ಷಿತ್ ಮ್ಯೂಸಿಕ್ ಕಾನ್ಸರ್ಟ್ ರಂಗೇರಿತ್ತು. ಸಾಕಷ್ಟು ಹಾಡುಗಳನ್ನು ರಘು ಮತ್ತವರ ತಂಡ ಪ್ರಸ್ತುಪಡಿಸಿದ್ದರು. ಮುಖ್ಯವಾಗಿ 'ಶಕ್ಕರ್' ಎಂಬ ಆಲ್ಬಮ್ ಅನ್ನು ಭಾರತದಲ್ಲಿ ಅನಾವರಣ ಮಾಡಲಾಯಿತು. 7 ಹಾಡುಗಳ ಆಲ್ಬಮ್ 6 ತಿಂಗಳ ಹಿಂದೆ ಲಂಡನ್‌ನಲ್ಲಿ ಲಾಂಚ್ ಆಗಿತ್ತು. ಭಾರತದಲ್ಲಿ ಇದೇ ಮೊದಲ ಬಾರಿಗೆ ಹೊರ ತರಲಾಯಿತು.